ಮಂಗಳೂರಿನಲ್ಲಿ ಕರ್ನಾಟಕ ಪ್ರಾಂತ್ಯದ  ಜೆಸ್ವಿಟೇತರ ವರಿಷ್ಠರ ಸಭೆ 

On : 2023-12-21

ದಿನಾಂಕ 16- 12 -2023 ಮತ್ತು 17 -12- 2023 ರಂದು ಮಂಗಳೂರಿನ ಫಾತಿಮಾ ರೀಟರೀಟ್ ಹೌಸ್ ನ ಕ್ರಿಸ್ತಾಲಯದಲ್ಲಿ ಕರ್ನಾಟಕ ಜಸ್ವಿಟ್  ವಿದ್ಯಾಸಂಸ್ಥೆಗಳ ಸಹಯೋಗಿಗಳ  ಸಭೆ ನಡೆಯಿತು.

ದಿನಾಂಕ 16.12.2023ರಂದು ಬೆಳಗ್ಗೆ 9 ಗಂಟೆಗೆ ಸರಿಯಾಗಿ ಫಾದರ್ ಸುಜಯ್  ಡ್ಯಾನಿಯಲ್  ಯೇ.ಸ. ಇವರು ಸುಂದರವಾದ ಅಂತರ್ಧರ್ಮೀಯ ಪ್ರಾರ್ಥನಾ ವಿಧಿಯನ್ನು ನಡೆಸಿಕೊಟ್ಟರು. ಸಹಯೋಗಗಳು ತಮ್ಮ ಪರಿಚಯ ಮಾಡಿಕೊಟ್ಟ ನಂತರ ಕರ್ನಾಟಕದ ಪ್ರಾಂತ್ಯಾಧಿಕಾರಿಗಳಾದ ಫಾದರ್ ಡಯನೀಸಿಯಸ್ ವಾಜ್'ರವರು ಪ್ರಾಸ್ತಾವಿಕವಾಗಿ ಎಲ್ಲರನ್ನೂ ಕುರಿತು ಮಾತನಾಡಿದರು. ಅದರ ಜೊತೆಗೆ "ಬಿಲ್ಡಿಂಗ್ ಮಿಷನ್ ಡ್ರೀವನ್ ಟೀಮ್ಸ್" ವಿಷಯವಾಗಿ ಸವಿಸ್ತಾರವಾಗಿ ನಮಗೆಲ್ಲರಿಗೂ ತಿಳಿಸಿದರು.

ಜಸ್ವಿಟ್ ವಿದ್ಯಾಸಂಸ್ಥೆಗಳಲ್ಲಿ ತಾವು ಕಾರ್ಯನಿರ್ವಹಿಸುವ ಸ್ಥಳದಲ್ಲಿ ತಾವು ಪಡುವ ಸಂತೋಷಕ್ಕೆ ಕಾರಣಗಳೇನು? ಮತ್ತು ತಾವು ಅನುಭವಿಸುತ್ತಿರುವ ಸವಾಲುಗಳೇನು? ಎನ್ನುವ ಪ್ರಶ್ನೆಗಳನ್ನು ನೀಡಿದರು. ಸಂಸ್ಥೆಗಳಲ್ಲಿ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಯಾವುದಾದರೂ ಮೂರು ಸಲಹೆಗಳನ್ನು ನೀಡುವಂತೆ ತಿಳಿಸಿದರು. ನಾಲ್ಕು ಗುಂಪುಗಳನ್ನಾಗಿ ಮಾಡಿ ಪ್ರಶ್ನೆಗಳನ್ನು ಚರ್ಚಿಸಲು ಅವಕಾಶ ಕೊಟ್ಟರು ನಂತರ ಆ ಗುಂಪಿನ ಕಾರ್ಯದರ್ಶಿಗಳು ಚರ್ಚಿಸಿದ ವಿಷಯವಾಗಿ ತಮ್ಮ ಅನಿಸಿಕೆಗಳನ್ನು ಹೇಳಿದರು. 

ಅದೇ ದಿನ ಮಧ್ಯಾಹ್ನ 2:30 ರಿಂದ ಮಂಗಳೂರಿನ ಸಂತ ಅಲೋಶಿಯಸ್ ಸಂಸ್ಥೆಯ ವಿವಿಧ ಕೇಂದ್ರಗಳಿಗೆ ಭೇಟಿ ನೀಡಲಾಯಿತು. ಸಂಜೆ ಅಲೋಷಿಯಸ್ ಕಾಲೇಜಿಗೆ ಭೇಟಿ ಮಾಡಿ ಅಲ್ಲಿಯೇ ಸಹಯೋಗಿಗಳು ಮತ್ತು ಸಂತ ಅಲೋಷಿಯಸ್  ಸಂಸ್ಥೆಯ ಎಲ್ಲಾ ಜಸ್ವಿಟ್ ಫಾದರ್ಸ್'ರವರ  ಜೊತೆ ಉತ್ತಮ ಸವಿಭೋಜನವನ್ನು ಸೇವಿಸಲಾಯಿತು.

ದಿನಾಂಕ 17.12.2023 ರಂದು ಮುಂಜಾನೆ 9:00ಗೆ ಶ್ರೀ ಅಡಿವೆಪ್ಪ ಹಾಲಗಿ, ಶ್ರೀಮತಿ ಜಯ ಮೇರಿ, ಶ್ರೀಮತಿ ವೆರೋನಿಕ ಇವರ ಪ್ರಾರ್ಥನೆಯೊಂದಿಗೆ ಎರಡನೇ ದಿನದ ಸಭೆ ಪ್ರಾರಂಭವಾಯಿತು. Presentation on the state of the society of Jesus ಎಂಬ ವಿಷಯವಾಗಿ ಸಹಯೋಗಿಗಳ ಜೊತೆಗೆ ಫಾದರ್ ಜೋಸ್ಸಿ ಡಿ'ಮೆಲ್ಲೊ ಇವರು ಸವಿವರವಾಗಿ ತಿಳಿಸಿದರು. ಅಲ್ಲದೆ ನಾಲ್ಕು ಗುಂಪುಗಳನ್ನಾಗಿ ಮಾಡಿ ಚರ್ಚೆಗೆ ಅವಕಾಶ ಮಾಡಿಕೊಟ್ಟು ನಂತರ ಚರ್ಚಿಸಿದ ವಿಷಯಗಳನ್ನು ಹಂಚಿಕೊಂಡರು.

ಇದೇ ದಿನ ಮಧ್ಯಾಹ್ನ 2-15 ರಿಂದ ಪ್ರಾಂತ್ಯಾಧಿಕಾರಿಗಳು ಸಂಘರ್ಷ ನಿರ್ವಹಣೆ ಕುರಿತು ಸವಿವರವಾಗಿ ಮಾತನಾಡಿದರು. ನಮ್ಮ ಸಮಸ್ಯೆಗಳನ್ನು ಆಲಿಸಿದರು ಅದಕ್ಕೆ ಪರಿಹಾರಗಳನ್ನು ಸಹ ಸೂಚಿಸಿದರು 3:45 ರಿಂದ ಎರಡು ದಿನದ ಸಭೆಯ ಮೌಲ್ಯಮಾಪನ ನಡೆದು ಸಭೆ ಯಶಸ್ವಿಯಾಗಿ ಮುಕ್ತಾಯವಾಯಿತು.

- ಅಡಿವಪ್ಪ ಹಾಲಗಿ